ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ಸಮಾಜಸೇವಾ ಸಂಘ
ಮತ್ತು ಕೋಟ ಆರಕ್ಷಕ ಠಾಣೆ ಇದರ ಜಂಟಿ ಆಶ್ರಯದಲ್ಲಿ
ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಆರಕ್ಷಕ ಠಾಣೆ ಇದರ ಎಸ್.ಐ. ನಿತ್ಯಾನಂದ
ಗೌಡ ಇವರು ವಿದ್ಯಾಥರ್ಿಗಳನ್ನು ಉದ್ದೇಶ್ಸಿ ಮಾತನಾಡಿ, ಇಂದಿನ
ಸಮಾಜದಲ್ಲಿ ಹೆಚ್ಚಾಗಿ ಯುವಕರು ಮಾದಕ ವಸ್ತುಗಳ
ವ್ಯಸನಿಗಳಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ವಿದ್ಯಾಥರ್ಿಗಳು ತಮ್ಮ ವಿದ್ಯಾಭ್ಯಾಸದ ಸಂದರ್ಭದಲ್ಲಿ ಸಹವಾಸ
ದೋಷದಿಂದ ಮಾದಕ ವಸ್ತುಗಳ ಕಡೆ ಗಮನ ಹರಿಸುತ್ತಾರೆ.
ಒಮ್ಮೆ ಮಾದಕ ವಸ್ತುಗಳ ವ್ಯಸನಿಯಾದರೆ ಅದರಿಂದ
ಹೊರಬರುವುದು ಕಷ್ಟ. ಆದ್ದರಿಂದ ವಿದ್ಯಾಥರ್ಿಗಳು ಅಧ್ಯಯನ
ಸಂದರ್ಭದಲ್ಲಿ ಕೆಟ್ಟವರ, ವ್ಯಸನಿಗಳ ಸಹವಾಸವನ್ನು ಮಾಡದೇ
ದೃಢ ಮನಸ್ಸಿನಿಂದ ತಮ್ಮ ಜೀವನವನ್ನು ಸುಂದರವಾಗಿ
ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿ.ಎಸ್.ಐ. (ಪ್ರೊಬೇಶನರಿ) ಶ್ರೀಶೈಲ
ಮುರಗೋಡು ಇವರು, ಮಾದಕ ವಸ್ತುಗಳ ಬಗ್ಗೆ ತಿಳಿಸಿ, ಅದರಿಂದ
ಆಗುವ ದುಷ್ಪರಿಣಾಮಗಳನ್ನು ತಿಳಿಸಿದರು. ವಿದ್ಯಾಥರ್ಿಗಳು ಇಂತಹ
ದುಶ್ಚಟದಿಂದ ದೂರವಿರಬೇಕೆಂದು ಎಚ್ಚರಿಸಿದರು.
ಶ್ರೀ ಸದಾಶಿವ ಹೊಳ್ಳರು ಸ್ವಾಗತಿಸಿದರು. ವಿದ್ಯಾಥರ್ಿನಿ ಯಜುಷಾ
ಪ್ರಾಥರ್ಿಸಿದರು. ಅಮೃತಾ ಧನ್ಯವಾದವನ್ನಿತ್ತರು. ಅನುಷಾ ಹೆಬ್ಬಾರ
ಕಾರ್ಯಕ್ರಮ ನಿರ್ವಹಿಸಿದ್ದರು.
ಸಮಾಜಶಾಸ್ತ್ರ ಉಪನ್ಯಾಸಕ ಶ್ರೀ ಜಿ. ಅಶೋಕಕುಮಾರ್ ಶೆಟ್ಟಿ
ಇವರು ಕಾರ್ಯಕ್ರಮ ಸಂಯೋಜಿಸಿದ್ದರು

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter