ವಿಜ್ಞಾನ ಸಂಘ ‘ವಿಶನ್’ನ ಉದ್ಘಾಟನೆ

ವಿವೇಕ ಪ.ಪೂ.ಕಾಲೇಜು, ಇದರ ವಿಜ್ಞಾನ ಸಂಘ ‘ವಿಶನ್’ನ ಉದ್ಘಾಟನೆಯನ್ನು ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ|| ಎ.ಪಿ.ಭಟ್ರು ನೆರವೇರಿಸಿದರು.dsc_0745
ನಂತರ ಅವರು ‘ಇರುವುದೊಂದೇ ಭೂಮಿ’ ಎನ್ನುವ ವಿಷಯದಲ್ಲಿ ‘ಪವರ್ ಪಾಯಿಂಟ್ ಪ್ರೆಸೆಂಟೇಶನ್’ನ ಮೂಲಕ ವಿದ್ಯಾಥರ್ಿಗಳಿಗೆ ಉತ್ತಮವಾದ ಮಾಹಿತಿಯನ್ನು ನೀಡಿದರು. ಅವರು ಮಾತನಾಡುತ್ತಾ ಈ ಭೂಮಿಯ ಸೃಷ್ಟಿ ರಚನೆ, ಇದರ ವೈವಿಧ್ಯತೆ ಒಂದು ಅದ್ಭುತವಾಗಿದೆ. ಬ್ರಹ್ಮಾಂಡದಲ್ಲಿ ಸುಮಾರು ಗ್ರಹಗಳನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿ ‘ಭೂಮಿ’ ಅತ್ಯಂತ ಚಿಕ್ಕ ಗ್ರಹವಾಗಿದೆ. dsc_0747ಇದು ಎಲ್ಲಾ ಗ್ರಹಗಳಲ್ಲಿ ಅತ್ಯಂತ ಸುಂದರ ಹಾಗು ಸೊಬಗಿನಿಂದ ಕೂಡಿದೆ. ನಮ್ಮ ಭೂಮಿಯ ರೀತಿಯ ವೈಶಿಶ್ಟ್ಯಮಯವಾದ, ವಾಸಯೋಗ್ಯ ಗ್ರಹ ಈ ಬ್ರಹ್ಮಾಂಡದಲ್ಲಿ ಮತ್ತೊಂದಿಲ್ಲ. ಇದರ ಸೃಷ್ಟಿಯೇ ಒಂದು ಅದ್ಭುತ ರೋಮಾಂಚನಗೊಳಿಸುತ್ತದೆ. ಇಂತಹ ಸುಂದರ ಭೂಮಿಯನ್ನು ಮಾನವ ತನ್ನ ಸ್ವಾರ್ಥಕ್ಕಾಗಿ ಹಾಳು ಮಾಡುತ್ತಿದ್ದಾನೆ.  ಆದುದರಿಂದ ಇದನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೆಚ್ಚು ಹೆಚ್ಚು ಸಸ್ಯರಾಶಿಗಳನ್ನು ಬೆಳೆಸಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳಬಹುದಾಗಿದೆ ಎಂದರು.dsc_0752
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಕೆ.ಜಗದೀಶ ನಾವಡ ಅವರು ಗಣ್ಯರನ್ನು ಸ್ವಾಗತಿಸಿದರು. ವಿದ್ಯಾಥರ್ಿ ದಿನಕರ್ ಅವರು ವಿಜ್ಞಾನ ಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ವಿದ್ಯಾಥರ್ಿ ಸುನೀಲ್ ಅವರು ವಂದನಾರ್ಪಣೆಗೈದರು. ಸಿದ್ದೇಶ್ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ರವಿ ಕಾರಂತ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter