ಸಹ್ಯಾದ್ರಿ ಮಂಗಳೂರಿನಲ್ಲಿ ನಡೆದ ವಿಜ್ಞಾನ ಮಾದರಿ ಸ್ಪಧೆಯಲ್ಲಿ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಕೋಟ: ಸಹ್ಯಾದ್ರಿಇಂಜಿನಿಯರಿಂಗ್ ಕಾಲೇಜ್ ಮಂಗಳೂರು ಇವರು ನಡೆಸಿದ `ಸಹ್ಯಾದ್ರಿ ಸೈನ್ಸ್‍ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡರು.

ವಿದ್ಯಾರ್ಥಿಗಳಾದ ಅನಿರುದ್ಧ, ಧನುಷ್ ಮತ್ತು ವಿನಾಯಕ ಇವರು ಸಿಎನ್‍ಸಿ ರೈಟಿಂಗ್ ಮೆಷಿನ್ ಪೆÇ್ರಜೆಕ್ಟ್‍ಗೆ ಪ್ರಥಮ ಸ್ಥಾನ ಹಾಗೆಯೇ ಶ್ರವಣ, ಮನೀಷ್ ಇವರು ತಯಾರಿಸಿದ ಮಾದರಿ`ಆಕ್ಸಿಡೆಂಟ್‍ಡಿಟೆಕ್ಷನ್ ಸಿಸ್ಟಮ್‍ಗೆ ತೃತೀಯ ಸ್ಥಾನ ಸೇರಿದಂತೆ ರೋಹಿತ್, ವಿದ್ವತ್ ಪ್ರಥಮ ಸಮಾಧಾನಕರ ಬಹುಮಾನ, ಸೋಹನ್, ವಿನ್ಯಾಸ್ ಕಾರಂತ್ ಮತ್ತು ಮನ್ವಿತ್ ಇವರಿಗೆ ದ್ವಿತೀಯ ಸಮಾಧಾನಕರ ಬಹುಮಾನ, ಜೀವನ್, ಸುಮುಖ, ಅಕ್ಷಯ ಶಾಸ್ತ್ರೀ, ವಸಂತತಂಡಕ್ಕೆತೃತೀಯಸಮಾಧಾನಕರ ಬಹುಮಾನ ಹಾಗು ಆದರ್ಶ ಮತ್ತು ಶ್ರೇಯಸ್ ಆರಾಧ್ಯ ಇವರಿಗೆ ಚತುರ್ಥ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಸಹ್ಯಾದ್ರಿ ಸೈನ್ಸ್‍ಟ್ಯಾಲೆಂಟ್ ಹಂಟ್ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡರು.