ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ
ವಿವೇಕ ಪದವಿಪೂರ್ವ ಕಾಲೇಜು, ವಿವೇಕ ಪ್ರೌಢಶಾಲಾ ವಿಭಾಗ, ವಿವೇಕ ಬಾಲಕಿಯರ ಪ್ರೌಢಶಾಲೆ ಹಾಗೂ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಇಂಟರಾಕ್ಟ್ ಕ್ಲಬ್ಗಳ ಪದಗ್ರಹಣ ಸಮಾರಂಭವು ವಿವೇಕ ಬಾಲಕಿಯರ ಪ್ರೌಢಶಾಲೆಯ ಸ್ವರ್ಣ ಭವನದಲ್ಲಿ ನೆರವೇರಿತು. ವಿವೇಕ ಪದವಿಪೂರ್ವ ಕಾಲೇಜಿನ ಇಂಟರಾಕ್ಟ್ ಅದ್ಯಕ್ಷರಾಗಿ ಶ್ರೀ ವಾಣಿ, ಪ್ರಥಮ ಪಿಯುಸಿ, ಇಂಟರಾಕ್ಟ್ ಕಾರ್ಯದಶರ್ಿಯಾಗಿ ಗಾಯತ್ರಿ, ಪ್ರಥಮ ಪಿಯುಸಿ, ವಿವೇಕ ಪದವಿಪೂರ್ವ ಕಾಲೇಜಿನ ಹೈಸ್ಕೂಲು ವಿಭಾಗದ ಇಂಟರಾಕ್ಟ್ ಅದ್ಯಕ್ಷರಾಗಿ ಸುಚಿತಾ 9 ಎ, ಕಾರ್ಯದಶರ್ಿಯಾಗಿ ಶ್ರೀಧರ 9 ಎ, ವಿವೇಕ ಬಾಲಕಿಯರ ಪ್ರೌಢಶಾಲೆಯ ಇಂಟರಾಕ್ಟ್ ಅದ್ಯಕ್ಷರಾಗಿ ಕಾವ್ಯ 10 ಬಿ, ಕಾರ್ಯದಶರ್ಿಯಾಗಿ ತನುಜಾ 10 ಬಿ ಹಾಗೂ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಇಂಟರಾಕ್ಟ್ ಅದ್ಯಕ್ಷರಾಗಿ ಸುಷ್ಮಾ 10 ಎ, ಕಾರ್ಯದಶರ್ಿಯಾಗಿ ಅಕ್ಷತಾ 10 ಬಿ ಪದದೀಕ್ಷೆಯನ್ನು ಪಡೆದರು.
ಪದ ಪ್ರದಾನ ಮಾಡಿದ ರೋಟರಿ ಕ್ಲಬ್ ನೀಡಿದ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಅಧ್ಯಕ್ಷ ರೋ| ನಾಗೇಶ್ ಶ್ಯಾನುಭಾಗ್ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವಲ್ಲಿ ಕ್ಲಬ್ ನ ಚಟುವಟಿಕೆಗಳು ಸಹಕಾರಿಯಾಗಲೆಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರದ ಜೇಸಿ ಸದಾನಂದ ನಾವಡರು ವಿದ್ಯಾಥರ್ಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಸಲಹೆಗಳನ್ನು ನೀಡುತ್ತಾ ಸಂಘಟನೆಯಿಂದಲೇ ಯಶಸ್ಸು , ವಿದ್ಯಾಥರ್ಿ ಜೀವನದಲ್ಲಿ ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎನ್ನುವ ಕರೆ ನೀಡಿದರು. ಇಂಟರಾಕ್ಟ್ ಕ್ಲಬ್ ನ ಧ್ಯೇಯೋದ್ದೇಶಗಳನ್ನು ಹಾಗೂ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ತಿಳಿಸಿದ ಸಂಚಾಲಕ ರೋ|ಸೀತಾರಾಮ ಆಚಾರ್ ಶುಭ ಹಾರೈಸಿದರು.
ಶುಭಾಂಶನೆಗೈದ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ರೋಟರಿ ಕ್ಲಬ್ ಮತ್ತು ವಿವೇಕ ವಿದ್ಯಾ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಸ್ಮರಿಸಿ, ಕ್ಲಬ್ ಗಳ ಕರ್ಯನಿರ್ವಹಣೆಯಲ್ಲಿ ಮಾತೃ ಸಂಸ್ಥೆಯ ಸಹಕಾರ ಕೋರಿದರು. ರೋಟರಿ ಕ್ಲಬ್ ನ ವಲಯ ಸೇನಾನಿ ರೋ|ನರಸಿಂಹ ಪ್ರಭು, ರೋ|ಸತೀಶ ಆಚಾರ್, ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ. ಜಗದೀಶ ಹೊಳ್ಳ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಪಿ. ಶ್ರೀಪತಿ ಹೇಳರ್ೆ ಉಪಸ್ಥಿತರಿದ್ದರು.