ವಿವೇಕ ವಿದ್ಯಾಸಂಘ ವಾರ್ಷಿಕೋತ್ಸವ ಸಡಗರ

ಕೋಟ: ಜೀವನದಲ್ಲಿ ಅತ್ಯಮೂಲ್ಯವಾದ ಆಸ್ತಿ ಯಾವುದೆಂದರೆ ಅದು ಮಾತಾ,ಪಿತಾ,ಗುರುಗಳು, ಇವರುಗಳ ಭದ್ರ ತಳಹದಿಯಲ್ಲಿ ನಾವುಗಳು ಬಹು ಎತ್ತರಕ್ಕೆ ಬೆಳೆಯಲ್ಲಿ ಸಾಧ್ಯವಾಗಿದೆ ಎಂದು ಬೆಂಗಳೂರಿನ

ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಹೇಳಿದರು.
ಶುಕ್ರವಾರ ಕೋಟ ವಿವೇಕ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ಪದವಿಪೂರ್ವ  ಮಹಾವಿದ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ  ಜೀವನದಲ್ಲಿ ನಾವುಗಳು ಕಾಣಬೇಕಾದ ವಿಚಾರಗಳು ಎಂದರೆ ಅದು ಸಣ್ಣ ಸಂಗತಿಯನ್ನು ಅನುಭವಿಸಿ ಸಂಭ್ರಮಿಸುವುದು, ಅನುಕಂಪ, ಹಂಚಿ ತಿನ್ನುವ ಪ್ರವೃತ್ತಿ, ಹೃದಯ ವೈಶಾಲತೆ,  ಅಜಾತ ಶತ್ರುಗಳಾಗಿ  ಬದುಕುವ ಪರಿಯನ್ನು ಬೆಳೆಸಿಕೊಳ್ಳುವುದು ಇವೆಲ್ಲವು  ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುತ್ತವೆ. ವಿದ್ಯಾರ್ಥಿ ಜೀವನವು ಸಹ ಅಷ್ಟೆ ಮೌಲ್ಯಯುತವಾಗಿ ಬೆಳೆಸಿಕೊಳ್ಳಬೇಕು.

ಇಲ್ಲಿನ ವಿವೇಕ ವಿದ್ಯಾಸಂಸ್ಥೆ ಇಡೀ ಶೈಕ್ಷಣಿಕ ಕ್ಷೇತ್ರಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ ಇಲ್ಲಿನ ಶಿಸ್ತು,ಶಿಕ್ಷಣದ ಗುಣಮಟ್ಟ ವಿದ್ಯಾರ್ಥಿಗಳನ್ನು ಬಹು ಎತ್ತರಕ್ಕೆ ಕೊಂಡ್ಯೊಯುತ್ತಿದೆ. ತಮ್ಮ ಜೀವನದಲ್ಲಿ ಆದರ್ಶ ಪುರುಷರ ಜೀವನವನ್ನು ಆಧಾರವಾಗಿಟ್ಡುಕೊಂಡು ಬದುಕಿ ಊರಿನ ಹೆಸರನ್ನು ಉತ್ತುಂಗಕ್ಕೆ ಎರಿಸಿ ಎಂದು ಕರೆ ಇತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ  ಪಿ ಪ್ರಭಾಕರ ಮಯ್ಯ ವಹಿಸಿದ್ದರು.

ಪ್ರಸೂತಿ ತಜ್ಞೆ  ಡಾ.ಅರುಂಧತಿ ರಾವ್, ಬೆಂಗಳೂರಿನ ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ  ಹಿಂದಿನ ಅಧ್ಯಕ್ಷ ರಮಾನಂದ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ ಪರಿಚಯಿಸಿದರು. ಕಾಲೇಜಿನ ವಿದ್ಯಾರ್ಥಿ ಉಪ ಮುಖಂಡ ಕೇಶವ ಉಪಾಧ್ಯ , ಶ್ರೀಶ ನಾಯಕ್ ವರದಿ ಮಂಡಿಸಿದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ನಿರೂಪಿಸಿದರು. ಹಿರಿಯ ಸಹಾಯಕ ಶಿಕ್ಷಕ ವೆಂಕಟೇಶ ಉಡುಪ ವಂದಿಸಿದರು.

ಕೋಟ ವಿವೇಕ ವಿದ್ಯಾಸಂಘ ಇದರ ಆಡಳಿತಕ್ಕೆ ಒಳಪಟ್ಟ ವಿವೇಕ ಪದವಿಪೂರ್ವ  ಮಹಾವಿದ್ಯಾಲಯ ಇದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಸೂತಿ ತಜ್ಞೆ  ಡಾ.ಅರುಂಧತಿ ರಾವ್, ಬೆಂಗಳೂರಿನ ಪ್ರಿಂಟೆಕ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ದಿನಕರ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ, ಹಿರಿಯ ಸಹಾಯಕ ಶಿಕ್ಷಕ ವೆಂಕಟೇಶ ಉಡುಪ ಮತ್ತಿತರರು ಉಪಸ್ಥಿತರಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter