ವಿದ್ಯಾರ್ಥಿ ಸಂಸತ್ಗೆ ಚುನಾವಣೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ
ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ಮುಖಂಡ, ಉಪಮುಖಂಡನ ಸ್ಥಾನಕ್ಕೆ
ಪ್ರಜಾಪ್ರಭುತ್ವ ಸಂಸದೀಯ ಮಾದರಿಯಲ್ಲಿ ಚುನಾವಣೆಯನ್ನು
ನಡೆಸಲಾಯಿತು. ವಿದ್ಯಾರ್ಥಿ ಮುಖಂಡನ ಸ್ಥಾನಕ್ಕೆ ನಡೆದ
ಚುನಾವಣೆಯಲ್ಲಿ ಮೊದಲಿಗೆ ಚುನಾವಣೆ ದಿನಾಂಕವನ್ನು
ಘೋಷಿಸಲಾಯಿತು. ಆಮೇಲೆ, ಉಮೇದುವಾರರ ನಾಮಪತ್ರ
ಸಲ್ಲಿಸುವಿಕೆ, ನಾಮಪತ್ರ ಪರಿಶೀಲನೆ, ಹಿಂತೆಗೆದುಕೊಳ್ಳುವಿಕೆ
ಇದಕ್ಕೆ ಸಮಯ ನೀಡಲಾಯಿತು.
ಕಾಲೇಜು ವಿಭಾಗದಿಂದ ವಿದ್ಯಾರ್ಥಿ ಮುಖಂಡನ 4 ವಿದ್ಯಾರ್ಥಿಗಳು
ಅಭ್ಯರ್ಥಿಗಳಾಗಿ ಸ್ಪಧರ್ಿಸಿದ್ದರು. ಉಪಮುಖಂಡನ ಸ್ಥಾನಕ್ಕೆ 2
ವಿದ್ಯಾಥರ್ಿಗಳು ಅಭ್ಯಥರ್ಿಗಳಾಗಿ ಸ್ಪಧರ್ಿಸಿದ್ದರು. ಚುನಾವಣಾ ಕಣದಲ್ಲಿ
ನಿಂತ ಉಮೇದುವಾರರಿಗೆ ತರಗತಿವಾರು ಚುನಾವಣಾ ಪ್ರಚಾರಕ್ಕೆ
ಅವಕಾಶ ಕಲ್ಪಸಲಾಯಿತು. ನಂತರ 8 ಮತಗಟ್ಟೆಗಳನ್ನು
ನಿಮರ್ಿಸಿ, ಉಪನ್ಯಾಸಕರನ್ನು ಪ್ರಿಸೈಂಡಿಂಗ್ ಅಧಿಕಾರಿ, ಪೋಲಿಂಗ್
ಅಧಿಕಾರಿಗಳನ್ನಾಗಿ ಮತಗಟ್ಟೆಗಳನ್ನು ನಿಯೋಜಿಸಲಾಯಿತು.
ಭದ್ರತೆಗಾಗಿ ಪೊಲೀಸ್ ಅಧಿಕಾರಿಗಳಾಗಿ ಎನ್.ಸಿ.ಸಿ. ವಿದ್ಯಾಥರ್ಿಗಳು ಕಾರ್ಯ
ನಿರ್ವಹಿಸಿದರು.
ವಿದ್ಯಾರ್ಥಿಗಳು ಸರದಿ ಪ್ರಕಾರ ಮತಗಟ್ಟೆಗೆ ಆಗಮಿಸಿ,
ತಮ್ಮ ಗುರುತಿನ ಚೀಟಿಯನ್ನು ತೋರಿಸಿ, ರಿಜಿಸ್ಟರ್ನಲ್ಲಿ ಸಹಿ ಮಾಡಿದ
ನಂತರ ಮತದಾನಕ್ಕೆ ಅವಕಾಶ ನೀಡಲಾಯಿತು. ಎಡಗೈ ತೋರು
ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಯಿತು. ವಿದ್ಯಾಥರ್ಿಗಳು
ನಿಭರ್ೀತಿಯಿಂದ ಮತದಾನ ಮಾಡಿದರು.
ಉಮೇದುವಾರರಲ್ಲಿ ಅಭ್ಯಥರ್ಿಗಳ ಆಯ್ಕೆಗಾಗಿ, ಅವರ ಹೆಸರು
ಮತ್ತು ಬ್ಯಾಗ್,ಪುಸ್ತಕ,ಪೆನ್ನು, ಸ್ಕೇಲ್ ಮುಂತಾದ ಚಿಹ್ನೆಯನ್ನು
ನೀಡಿ ಬ್ಯಾಲೆಟ್ ಪೇಪರ್ ಮುದ್ರಿಸಲಾಗಿತ್ತು.
ಮತದಾನದ ನಂತರ ಮತಪೆಟ್ಟಿಗೆಗಳನ್ನು ಪೊಲೀಸ್
ಭದ್ರತೆಯೊಂದಿಗೆ ಸ್ಟ್ರಾಂಗ್ ರೂಮಿಗೆ ತಂದು, ಅಭ್ಯಥರ್ಿ
ಏಜೆಂಟ್ಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.
ಮತ ಎಣಿಕೆಯ ನಂತರ ವಿದ್ಯಾಥರ್ಿ ಮುಖಂಡನ ಸ್ಥಾನಕ್ಕೆ
ಕಾಲೇಜು ವಿಭಾಗದಿಂದ ರಿತೇಶ್ ಕುಂದರ್ ಹಾಗು ಉಪಮುಖಂಡನ
ಸ್ಥಾನಕ್ಕೆ ಪ್ರೌಢಶಾಲಾ ವಿಭಾಗದ ವಿಲಾಸ್ ಇವರು ಬಹುಮತದಿಂದ
ಆಯ್ಕೆಯಾದರು.
ಮುಖ್ಯ ಚುನಾವಣಾಧಿಕಾರಿ ಕಾಲೇಜಿನ ಪ್ರಾಂಶುಪಾಲರಾದ ಶ್ರಿ ಕೆ.
ಜಗದೀಶ ನಾವಡರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆ
ಅತ್ಯಂತ ಶಾಂತಿಯುತವಾಗಿ ನಡೆಯಿತು.
ಚುನಾವಣಾ ಸಹಾಯಕ ಅಧಿಕಾರಿಗಳಾಗಿ ಉಪನ್ಯಾಸಕರಾದ ಶ್ರೀ ಎ.
ಗಣೇಶಕುಮಾರ ಶೆಟ್ಟಿ ಮತ್ತು ಶಿಕ್ಷಕಿ ಶ್ರೀಮತಿ ರತಿ ಬಾ ಇವರು
ಸಹಕರಿಸಿದ್ದರು. ವಿದ್ಯಾರ್ಥಿಗಳಲ್ಲಿ ಚುನಾವಣೆಯ ಮಹತ್ವ ಮತ್ತು

ಅದರ ಪ್ರಕ್ರಿಯೆ ಮತ್ತು ಮತದಾನದ ಜಾಗೃತಿ
ಮೂಡಿಸುವುದಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter