ವಿದ್ಯಾರ್ಥಿ ಸರಕಾರದ ಉದ್ಘಾಟನೆ / ಶಾಲಾ ಸಂಸತ್ತಿನ ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನ ಎಂ.ಜಿ.ಎಂ. ಸಭಾಂಗಣದಲ್ಲಿ ನಡೆಯಿತು.
ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭದ ಉದ್ಘಾಟಕರಾಗಿ ಬಾರ್ಕೂರು ನೇಶನಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹಾಗು ಬಾರ್ಕೂರು ವಿದ್ಯಾವರ್ಧಿನಿ ಸಂಘದ ಕಾರ್ಯದರ್ಶಿಯಾದ ಶ್ರೀ ಸೀತಾರಾಮ ಶೆಟ್ಟಿಯವರು ಆಗಮಿಸಿ ಮಾತನಾಡಿ ‘ಸಂಸತ್ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಮುಖ್ಯವಾದ ಭಾಗವೇ ಆಗಿದೆ. ಇಲ್ಲಿ ಸ್ವೀಕರಿಸುವ ನಿರ್ಣಯಗಳು, ಶಾಸನಗಳು ದೇಶವನ್ನು ಪ್ರಗತಿ ಪಥದತ್ತ ಕೊಂಡೈಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಂಸತ್ತಿನ ಸದಸ್ಯರಾಗುವ ಪ್ರಕ್ರಿಯೆಗಳಾದ ನಾಮಪತ್ರ ಸಲ್ಲಿಕೆ, ಮತದಾನ ನಡೆಸುವ ವಿಧಾನ, ಸದಸ್ಯರ ಆಯ್ಕೆ. ಸಂಸತ್ತಿನ ಕಾರ್ಯ ವಿಧಾನಗಳನ್ನು ತಿಳಿದುಕೊಳ್ಳಬೆಕು. ಶಾಲಾ ಸರಕಾರದಲ್ಲಿ ನೀಡಿದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದಲ್ಲಿ ಮುಂದೆ ಉತ್ತಮ ನಾಯಕನಾಗಲು ಸಾಧ್ಯ’ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಸಭಾಧ್ಯಕ್ಷತೆ ವಹಿಸಿ, ಮಂತ್ರಿ ಮಂಡಲದ ಸದಸ್ಯರೆಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಹಾಗೇ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಾಸಕಾಂಗ ನಿಯಮಗಳನ್ನು ತಿಳಿದುಕೊಂಡು ಕೇಂದ್ರದಲ್ಲಿ ರಾಜ್ಯ ಸಭೆ, ಲೋಕ ಸಭೆ, ರಾಜ್ಯದಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ ಇದರ ಕಾರ್ಯ ವೈಖರಿಗಳನ್ನು ಹಾಗು ಇಲ್ಲಿನ ಆಯ್ಕೆ, ಪ್ರಕ್ರಿಯೆಗಳನ್ನು ಗಮನಿಸಬೇಕು. ಕಾರ್ಯ ನಿರ್ವಹಣಾ ವಿಧಾನಗಳನ್ನು ಅರಿತು ಜೀವನದಲ್ಲಿ ಶಿಸ್ತಿನಿಂದ ವರ್ತಿಸಿದರೆ ಉತ್ತಮ ನಾಯಕನಾಗಲು ಸಾಧ್ಯ. ವಿದ್ಯಾರ್ಥಿಗಳು ವಿಶಾಲ ಮನೋಭಾವವನ್ನು ಹೊಂದಿ ಆದರ್ಶ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕರಾದ ಶ್ರೀ ವೆಂಕಟೇಶ ಉಡುಪರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿ ಸರಕಾರ ಮುಖ್ಯಮಂತ್ರಿಯಾದ ಕುಮಾರ ಯಶೋಧರ ಶಾಸ್ತ್ರಿ ಸ್ವಾಗತಿಸಿದರು. ಸಭಾಪತಿಯಾದ ಚಂದನ ಎನ್.ಮೆಂಡನ್ ಮತ್ತು ಉಪಸಭಾಪತಿಯಾದ ರೋಲ್ವಿನ್ ರೋಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಮುಖ್ಯಮಂತ್ರಿಯಾದ ಪ್ರಜ್ವಲ್ ಧನ್ಯವಾದವನ್ನಿತ್ತರು.
ವಿದ್ಯಾರ್ಥಿ ಸರಕಾರದ ಸಂಯೋಜಕರಾದ ಶ್ರೀ ಗಣೇಶ ಕುಮಾರ ಶೆಟ್ಟಿ ಹಾಗು ಶ್ರೀಮತಿ ರತಿ ಬಾೈ ಕಾರ್ಯಕ್ರಮ ಸಂಯೋಜಿಸಿದ್ದರು. ಕುಮಾರಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter