ವಿಜ್ಞಾನ ಸಂಘ – ವಿಶನ್ ಉದ್ಘಾಟನೆ

ಕೋಟ : ವಿವೇಕ ಪದವಿಪೂರ್ವ ಕಾಲೇಜಿನ 2017-18ನೇ ಸಾಲಿನ ವಿಜ್ಞಾನ ಸಂಘ ‘ವಿಶನ್’ ಇದರ ಉದ್ಘಾಟನೆಯು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾರ್ಥಿನಿ ಪ್ರಸ್ತುತ ಸಾಫ್ಟ್‍ವೇರ್ ಇಂಜಿನಿಯರ್‍ಆಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರಿ ಲಾವಣ್ಯ ಹೇರ್ಳೆ ಅವರು ಆಗಮಿಸಿ ಉದ್ಘಾಟಿಸಿದರು.
ನಂತರ ಅವರು ‘ಸೋಶಿಯಲ್ ಮೀಡಿಯ ಮೈನಿಂಗ್’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡುತ್ತಾ ಸಾಮಾಜಿಕ ಜಾಲತಾಣಗಳಾದ ವಾಟ್ಸಾಫ್, ಫೇಸ್‍ಬುಕ್, ಟ್ವೀಟರ್, ಇನ್ಸ್ಟಗ್ರಾಮ್ ಇತ್ಯಾದಿಗಳ ಕಾರ್ಯ ವಿಧಾನದ ಬಗ್ಗೆ ತಿಳಿಸಿದರು. ಸಾಮಾಜಿಕ ಜಾಲತಾಣಗಳಿಂದ ನಮಗೆ ಆಗುವ ಅನುಕೂಲ ಹಾಗು ಅನಾನುಕೂಲವನ್ನು ವಿಸ್ತಾರವಾಗಿ ತಿಳಿಸಿದರು. ಹಾಗೆಯೇ ಹೇಗೆ ಸಾಮಾಜಿಕ ಜಾಲತಾಣಗಳು ನಮ್ಮ ಖಾಸಗಿ ಮಾಹಿತಿಗಳನ್ನು ಹೇಗೆ ಅಪಹರಿಸುತ್ತವೆ ಮತ್ತು ನಮ್ಮನ್ನು ಹೇಗೆ ನಿಯಂತ್ರಿಸುವ ಬಗೆಯನ್ನು ವಿವರಿಸಿ ಋಣಾತ್ಮಕ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು, ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆ ಮಾಡಿ ಅದರಿಂದಾಗುವ ಅನಾಹುತಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಮುಖ್ಯ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ವಿಜ್ಞಾನ ಸಂಘದ ಪ್ರತಿನಿಧಿ ಕುಮಾರ ಶ್ರೀನಿಧಿ ಎಂ.ಎಸ್. ಧನ್ಯವಾದವನ್ನಿತ್ತರು. ಕುಮಾರಿ ಸಮನಾ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ಶ್ರಿ ರವಿ ಕಾರಂತ್ ಕಾರ್ಯುಕ್ರಮ ಸಂಯೋಜಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter