ವಿವೇಕ ಪದವಿಪೂರ್ವ ಕಾಲೇಜಿನ ಸಮಾಜಸೇವಾ ಸಂಘದ ಆಶ್ರಯದಲ್ಲಿ ಆರಕ್ಷಕ ಠಾಣೆಯ ಅಧಿಕಾರಿಗಳಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸುರಕ್ಷತೆ ಇದರ ಕುರಿತಾಗಿ ಮಾಹಿತಿ ಕಾರ್ಯಕ್ರಮವು ಸಭಾಂಗಣದಲ್ಲಿ ಜರುಗಿತು.
ಕೋಟ ಆರಕ್ಷಕ ಠಾಣೆಯ ಪೆÇ್ರಬೆಶನರಿ ಪಿ.ಎಸ್.ಐ. ಶ್ರೀ ಶ್ರೀಧರ ನಾಯ್ಕರವರು ವಿದ್ಯಾರ್ಥಿಗಳಿಗೆ ಕಾನೂನು ವ್ಯವಸ್ಥೆಯ ಕಾಯಿದೆ ಬಗ್ಗೆ ಎಳೆ-ಎಳೆಯಾಗಿ ವಿವರಿಸಿ; ಅಪರಾಧ ಮತ್ತು ಅದರ ಶಿಕ್ಷೆಯ ಕುರಿತಾಗಿ ತಿಳಿಸುತ್ತಾ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಮೊದಲ ಹಂತದ ಕಾನೂನು ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು. ಹಾಗೆ ರಸ್ತೆ ನಿಯಮ, ಅದರ ಪರಿಪಾಲನೆ ಮತ್ತು ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಕೋಟ ಆರಕ್ಷಕ ಠಾಣೆಯ ಪೆÇೀಲೀಸ್ ಸಬ್ ಇನ್ಸ್‍ಪೆಕ್ಟರ್ ಶ್ರೀ ಸಂತೋಷ ಆನಂದ ಕಾಯ್ಕಿಣಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ವ್ಯವಸ್ಥೆ ಮತ್ತು ಕಾಯಿದೆ ನಿಯಮಗಳ ಬಗ್ಗೆ ತಿಳಿದು ಅದನ್ನು ಪರಿಪಾಲಿಸಿದಲ್ಲಿ ಸನ್ನಡತೆಯಿಂದ ಕೂಡಿ ಉತ್ತಮ ನಾಗರೀಕರಾಗಿ ಬದುಕಲು ಸಾಧ್ಯ ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಕಾರ್ಯದರ್ಶಿ ಶ್ರೀ ಪಿ. ಸುಬ್ರಹ್ಮಣ್ಯ ಉಪಾಧ್ಯರು ವಹಿಸಿದ್ದರು. ಕೋಟ ವಿದ್ಯಾಸಂಘದ ಕೋಶಾಧಿಕರಿ ಶ್ರೀ ವಲೇರಿಯನ್ ಮೆನೇಜಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕೋಟ ವಿದ್ಯಾಸಂಘ ಕೊಡಮಾಡಿದ 2 ಬ್ಯಾರಿಕೇಡ್‍ನ್ನು ಕೋಟಆರಕ್ಷಕ ಠಾಣೆಯವರಿಗೆ ಹಸ್ತಾಂತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಗಣ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಕೋಟ ಆರಕ್ಷಕ ಠಾಣೆಯ ಇನ್ನಿತರ ಸದಸ್ಯರು, ಹಾಗು ವಿದ್ಯಾಸಂಸ್ಥೆಗಳ ಅಧ್ಯಾಪಕರು ಹಾಜರಿದ್ದರು. ಸಮಾಜಸೇವಾ ಸಂಘದ ಸಂಚಾಲಕರಾದ ಶ್ರೀ ಅಶೋಕ ಕುಮಾರ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದ್ದರು. ಉಪನ್ಯಾಸಕರಾದ ಶ್ರೀ ಮಂಜುನಾಥ ಉಪಾಧ್ಯರು ಧನ್ಯವಾದವನ್ನಿತ್ತರು. ಉಪನ್ಯಾಸಕ ಶ್ರೀ ಸದಾಶಿವ ಹೊಳ್ಳರು ಕಾರ್ಯಕ್ರಮ ನಿರ್ವಹಿಸಿದರು.