ಸಾಹಿತ್ಯ ಸಂಘದ ಉದ್ಘಾಟನೆ

       ವಿವೇಕ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟಕರಾಗಿ ಸಾಹಿತಿ ಗಿರಿಮನೆ ಶ್ರೀ ಶ್ಯಾಮರಾವ್ ಇವರು ಆಗಮಿಸಿದ್ದರು. ದೀಪ ಬೆಳಗಿಸುವುದರ ಮೂಲಕ ಸಾಹಿತ್ಯ ಸಂಘವನ್ನು ಉದ್ಘಾಟಿಸಿ, ಮಾತನಾಡಿ, ವಿದ್ಯಾಥರ್ಿಗಳು ತಮ್ಮ ವಿದ್ಯಾಥರ್ಿ ಜೀವನದಲ್ಲಿ ಬೇರೆ ಆಕರ್ಷಣೆಗೆ ಒಳಗಾಗದೇ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ತಮ್ಮ ಪಠ್ಯದೊಂದಿಗೆ ಇತರೆ ಲೇಖಕರ ಪುಸ್ತಕವನ್ನು ಓದಬೇಕು. ಕಥ, ಕವನ, ಕಾದಂಬರಿ, ನಾಟಕ ಮುಂತಾದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಜೀವನದಲ್ಲಿ ಓದು ‘ಪ್ರಬುದ್ಧತೆಯನ್ನು ಪರಿಪಕ್ವತೆಯನ್ನು ಬೆಳೆಸುತ್ತದೆ. ಪ್ರಾರಂಭದ ಹಂತದಲ್ಲಿ ಓದುವ ಹವ್ಯಾಸವೇ ಸಾಹಿತ್ಯಾಭಿರುಚಿಯನ್ನು ತಂದು ಕೊಡುತ್ತದೆ. ಆದ್ದರಿಂದ ವಿದ್ಯಾಥರ್ಿಗಳು ಈ ದಿಶೆಯಲ್ಲಿ ಪ್ರಯತ್ನಶೀಲರಾಗಬೇಕೆಂದು ತಿಳಿಸಿದರು.img_8712
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಮಾತನಾಡಿ ವಿದ್ಯಾಥರ್ಿಗಳು ಸಮಯವನ್ನು ಹಾಳು ಮಾಡದೇ, ಕಥೆ, ಕಾದಂಬರಿ ಮುಂತಾದ ಪುಸ್ತಕಗಳ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು. ಸಾಹಿತ್ಯವು ಮನುಷ್ಯರನ್ನು ಸಹೃದಯವಂತರನ್ನಾಗಿಸುತ್ತದೆ ಎಂದು ತಿಳಿಸಿದರು.img_8721
ಅಜಪುರ ಕನರ್ಾಟಕ ಸಂಘದ ಕಾರ್ಯದಶರ್ಿ ಅಶೋಕ್ ಭಟ್ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಕಾರ್ಯದಶರ್ಿ ಕುಮಾರಿ ಶ್ರೀಲಕ್ಷ್ಮಿ ಉಪಾಧ್ಯ ಸ್ವಾಗತಿಸಿದರು. ಕುಮಾರಿಯರಾದ ಕಾವ್ಯ, ಸಿಂಧು ಪ್ರಾಥರ್ಿಸಿದರು. ಜೊತೆ ಕಾರ್ಯದಶರ್ಿ ಕುಮಾರಿ ಸೌಮ್ಯ ಧನ್ಯವಾದವನ್ನಿತ್ತರು. ವಿದ್ಯಾಥರ್ಿ ಸುದರ್ಶನರಾವ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶ್ರೀ ಚಂದ್ರಶೇಖರ ಎಚ್.ಎಸ್. ಕಾರ್ಯಕ್ರಮ ಸಂಯೋಜಿಸಿದ್ದರು.

Post comment

Your email address will not be published. Required fields are marked *

Copyright © 2016 Kota Vidya Sangha (R.), All rights reserved. Developed By: CoastalLive.com URL Counter